ಬರ್ತಾ ಬರ್ತಾ “ಮಲ್ಯರ” ಕುದುರೆ “ತೂರಾಡ್ತ” ಇತ್ತಂತೆ.
ಅಜ್ಜಿಗೆ ಅರಿವೆ ಕಾಟ
ಮಗಳಿಗೆ “ಅರಿವಿರದ” ಕಾಟ
ಅಜ್ಜ ಹಾಕಿದ ಆಲದಮರಕ್ಕೆ
ಪಾಶ್ಚಾತ್ಯ ಗೊಬ್ಬರ ಹಾಕಿದರಂತೆ
ಉಂಡೂ ಹೋದ,ಪ್ಲೇಟೂ ತಗೊಂಡು
ಯಾಕೆ ಒಲ್ಲೆ ಮಗಳೆ ಅಂದ್ರೆ
“ಶಟಲ್” ಹೋದ್ರೆ “ಎಕ್ಸ್ಪಪ್ರೆಸ್” ಅಂದಳಂತೆ.
ಹೆಂಡ ಸಾರಾಯಿ ಸಹವಾಸ
ಮತ್ತು ಇಳಿಯೋ ತನಕ ಸ್ವರ್ಗವಾಸ
ಚಿಂತೆ ಇಲ್ಲದವರಿಗೆ ಹೊಸೊರು ರೋಡ್ ನಲ್ಲಿ ನಿದ್ದೆಯಂತೆ
ಉದ್ಯೋಗವಿಲ್ಲದ “ಬಡಗಿ” ಕಂಪ್ಯೂಟರ್ ಕೋರ್ಸ್ ಸೇರಿದನಂತೆ
ಅಲ್ಪನಿಗೆ ಆನ್ ಸೈಟ್ ಅಸ್ಸೈನ್ ಮೆಂಟ್ ಸಿಕ್ಕಿದ್ರೆ, ವೀಸಾ ಗೆ ಫ಼್ರ್ಏಮ್ ಹಾಕಿಸಿ ಇಟ್ಟನಂತೆ