ಕಣ್ಣು ಮುಚ್ಚಿದರೆ ತಲೆ ಚಿಟ್ಟೆನಿಸುವ ಯೋಚನೆಗಳು..ಒಂದಾ..,ಎರಡಾ..? ಏನೋ ಒಂದು ಸಮಾಧಾನ ಮಾಡ್ಕೊಂಡು ಬಿಡೋಣ ಅನ್ನೋದಿಕ್ಕೆ. “ಅಲ್ಲ ನನಗೆ ಯಾಕೆ ಬೇಕಿತ್ತು ..? ಏನಿದು ತಿಕಲು..?” ಅಂತ ಸಮೀರ ಒಂದೆರ್ಎಡು ತಾಸಿನಿಂದ ತನ್ನ Flatಲ್ಲಿ ದಿಂಬಿಗೆ ತಲೆ ಕೊಟ್ಟು ತಲೆ ಕೆಡಿಸಿಕೊಳ್ತಾನೆ ಇದ್ದ.”ಪದ್ಮನಾದ್ರೂ ಇದ್ದಿದ್ರೆ ಈ ತಲೆನೋವು ಇರ್ತಿರ್ಲಿಲ್ವೇನೊ” ಅಂತ ಹಳಹಳಿಸ್ತಾನೆ ಇದ್ದ.
ಪ್ರಪಂಚದ ಕಣ್ಣಿಗೆ ಸಮೀರ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್.ಹೆಸರಾಂತ ಬಿಲ್ಡರ್ ನ ಹೆಸರಿಲ್ಲದ Flat…ಈಗ ಇವನ ಹೆಸರು ಮನೆ ಮುಂದೆ.ದೊಡ್ಡ ಕಾರು,ಸಣ್ಣ ಸಂಸಾರ.ಹೆಂಡತಿ ಪದ್ಮಲತ ಮತ್ತೊಂದು ಮಲ್ಟಿನ್ಯಾಶನಲ್ ಕಂಪನಿಯಲ್ಲಿ ಪ್ರಾಜೆಕ್ಟ್ ಎಂಜಿನಿಯರ್.ಓದೋದು,ಕೆಲಸ ಬಿಟ್ಟರೆ ಬೇರೆ ಪ್ರಪಂಚ ಇದೆ ಅಂತ ಇತ್ತೀಚಿನವರೆಗೂ ಸಮೀರನಿಗೆ ತಿಳಿದಿರಲಿಲ್ಲ.
ಅಪ್ಪ,ಅಮ್ಮ ಡಾಕ್ಟರ್,ಗುಲಬರ್ಗಾದಲ್ಲಿ ಅವರದೇ ಹೆಸರಾಂತ ನರ್ಸಿಂಗ್ ಹೊಂ.ಮಗ ಓದಿ ಡಾಕ್ಟರ್ ಆಗಿ ಮನೆತನದ ಹೆಸರು ಉಳಿಸಿ,ಬೆಳೆಸಲಿ ಅಂತ ಒಳ್ಳೆ ಶಾಲೆ,ಕಾಲೇಜು ಸೇರಿಸಿ..,ಮುತುವರ್ಜಿಯಿಂದ ಸಾಕಿ,ಕಲಿಸಿ ಕೊನೆಗೂ ಇವನು ಎಂಜಿನಿಯರಿಂಗ್ ಮಾಡ್ತೀನಿ ಅಂದ ದಿನ ತಡೆಯಲಾಗದಷ್ಟಲ್ಲದಿದ್ದರೂ,ಆಶಾಗೋಪುರ ನುಚ್ಚುನೂರಾಗಿದ್ದಕ್ಕೆ ವ್ಯಥೆ ಪಟ್ಟರು.ಕೊಟ್ಟ ಒಂದು ನೋವನ್ನು ಸಮೀರ ಬಹುಬೇಗ ಮಾಯವಾಗಿಸಿದ.ಸುರತ್ಕಲ್ ನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರತಿವರ್ಷವೂ ಎಲ್ಲಾ ಪರೀಕ್ಷೆ,ಸ್ಪರ್ಧೆಗಳಲ್ಲಿ ಅದ್ವೀತಿಯನೆನಿಸಿಕೊಂಡ.ಮೊದಲನೆ ಬೆಂಚಿನ ಗೆಳೆಯರು,ಲೆಕ್ಚರರ್ ಗಳ ಪ್ರೀತಿ ಪಾತ್ರ.ಬಹುಪಾಲು ಹಾಸ್ಟೆಲ್ ನ ಹುಡುಗರಿಗೆ ಮಾತ್ರ ನಾಲಾಯಕ್ಕು.”ಓದೋದು ಬಿಟ್ಟು ಬೇರೇನು ಗೊತ್ತಿಲ್ಲದ ಮುಂಡೇದು..”ಅಂತ ಯಾರದ್ರೂ ಎದುರಿಗೆ ಹೇಳಿದ್ರು ನಕ್ಕು ಸುಮ್ಮನಾಗುತ್ತಿದ್ದ.ಎಷ್ಟು ಬಾರಿ ಯೋಚಿಸಿದ್ರೂ ಓದೋದು ಬಿಟ್ರೆ ಬೇರೆ ಏನು ಇರಬಹುದು ಅಂತ ಹೊಳೀತಾ ಇರಲಿಲ್ಲ..ಹಾಗೆನಾದ್ರೂ ಹೊಳೆದ್ರು..ಮನಸ್ಸಿಗೆ ಹಿಡಿತಾ ಇರಲಿಲ್ಲ.
ಆರನೇ ಸೆಮಿಸ್ಟರ್ ಮುಗೀತಿದ್ದ ಹಾಗೆ ಕ್ಯಾಂಪಸ್ ಇಂಟರ್ವ್ಯೂನಲ್ಲಿ ಮೊದಲನೇ ದಿನದ ಮೊದಲ ಕಂಪನಿಯಲ್ಲಿ ಕೆಲಸ.ಅದೇ ಕಂಪನಿಯಲ್ಲಿ ಇಂದಿಗೆ ಐದು ವರ್ಷ.ಐದು ವರ್ಷದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್ ಸಮೀರನಿಗಲ್ಲದೆ ಬೇರೆಯವರಿಗೆ ಕಬ್ಬಿಣದ ಕಡಲೆ.ಕಾಲೇಜಿನ ವಿದ್ಯಾಭ್ಯಾಸದಷ್ಟೇ ಆಸಕ್ತಿ,ಶ್ರದ್ಧೆ..ಮುತುವರ್ಜಿಯಿಂದ ಕೆಲಸ..ಸೂಕ್ಷ್ಮ ಕಣ್ಣು,ಪ್ರಭಾವಶೀಲ್ ವ್ಯಕ್ತಿತ್ವ,ನೇರ ನಡೆ ನುಡಿ…,ಯಾವುದೇ Office ಪೊಲಿಟಿಕ್ಸ್ ನಲ್ಲಿ ಭಾಗಿಯಾಗದಿರುವುದು ಇವೆಲ್ಲಾ ಒಂದಷ್ಟು ಅಂಶಗಳು.ಈ office ಪೊಲಿಟಿಕ್ಸ್ ಅದೆಲ್ಲ ಸಮೀರನಿಗೆ ಅರ್ಥ ಆಗೊಲ್ಲ ಅಂತ ಅಲ್ಲ.ಅದೆನೋ ಅವನು ಬೆಳೆದು ಬಂದ ವಾತಾವರಣ,ತುಂಬಿಕೊಂಡ ಜೀವನ ಮೌಲ್ಯಗಳು ಇವೆಲ್ಲ, ಅವನನ್ನು ಇದರೆಲ್ಲದರಿಂದ ದೂರವಿಟ್ಟಿದ್ದವು.
ಕೆಲಸ ಸೇರಿದ ಮೂರು ವರ್ಷಕ್ಕೆ ಮದುವೆ,ಮನೆಯಲ್ಲಿ ನೋಡಿದ ಹುಡುಗಿ ಪದ್ಮಲತ.ಇನ್ನು ಮದುವೆಗೆ ನಾನು ರೆಡಿ ಇಲ್ಲ ಅಂತ ಸಮೀರನಿಗೆ ಅನಿಸಿದ್ದರೂ ಅಪ್ಪ ಅಮ್ಮನ ಒತ್ತಾಯಕ್ಕೆ ಮಣಿದು ಹೂಂ ಅಂದಿದ್ದ.ಹೇಳಿ ಮಾಡಿಸದಂತಹ ಜೋಡಿ ಅಲ್ಲದಿದ್ದರು, ದಿನ ಕಿರಿಕಿರಿ ಇಲ್ಲದ ಜೀವನ.ಸಮೀರನು ಅವಳಿಂದ ಹೆಚ್ಚಿನದೇನನ್ನು ನಿರೀಕ್ಷೆ ಮಾಡದೆ ಇದ್ದರಿಂದ,ಪದ್ಮಳು ಇವನಂತೆ ಕೆರಿಯರ್ oriented ಹುಡುಗಿ ಆದ್ದರಿಂದ ಇಬ್ಬರ ಮಧ್ಯೆ ಸಣ್ಣ ಪುಟ್ಟ ವಿಷಯದಲ್ಲಿ ತಕರಾರು ಏನು ಅಷ್ಟಿರಲಿಲ್ಲ.ಅಡುಗೆ ಮಾಡಿದ್ರೆ ಮಾಡಿದಂತೆ, ಇಲ್ಲದಿದ್ದರೆ ಇಬ್ಬರು ಹೊರಗಡೆನೊ,officenallo ತಿನ್ತಾ ಇದ್ದರು.ಮನೆ ಊಟ,ತಿಂಡಿ,ಕಾಡು ಹರಟೆಗಿಂತ ಜೀವನ ದೊಡ್ಡದು,ಕೆಲಸ ಮುಖ್ಯ ಅಂತ ನಂಬಿದ ಇಬ್ಬರು.ಇಬ್ಬರ ಅಂದುಕೊಂಡದ್ದೆ ಸರಿ ಎನಿಸುವ ಹಾಗೆ ಭ್ರಮೆ ಹುಟ್ಟಿಸಿದ್ದ ಕೆಲಸ.
ಸರಸ ಸಲ್ಲಾಪ ಅಂದ್ರೆ ಆಫ಼ೀಸ್ ವಿಷ್ಯದ ಚರ್ಚೆ..ಆ Technology ಹಾಗೆ ಈ Technology ಹೀಗೆ..ಸುಖವಾಗೆ ಇದೀವಿ ಅನ್ತ ಇಬ್ಬರು ಭಾವಿಸಿದ್ದರು.ಅಪರೂಪಕ್ಕೆ ಒಮ್ಮೆ ಸಮೀರನ ತಂದೆ ತಾಯಿನೊ,ಪದ್ಮನ ಕಡೆಯವರೊ ಬಂದ್ರೆ ಆ Hotelnalli ಅದು ಚೆನ್ನಾಗಿರುತ್ತೆ,ಈ Hotelnaಲ್ಲಿ ಇದು ಚೆನ್ನಾಗಿರುತ್ತೆ ಅಂತ ಕಾರ್ ನಲ್ಲಿ ಕರ್ಕೊಂಡು ಹೋಗಿ ಬಂದ್ರೆ ಅವರಿಗು ಸಂತೊಶ..ಇವರಿಗು ತಮ್ಮವರೊಡನೆ Quality Time ಕಳೆದದ್ದಾಕ್ಕಗಿ ನೆಮ್ಮದಿ.ಬಂದವರು ಎರಡು ದಿನ ಇದ್ದು ಇವರು ತುಂಬ ಅನ್ಯೋನ್ಯವಾಗಿ ಇರೊದನ್ನ ನೋಡಿ ಹೊಟ್ಟೆ ತಣ್ಣಗಾಗಿ ಹೊರಡುವರು.
ಮಕ್ಕಳು ಬೇಡ ಇಲ್ಲದ ಜವಾಬ್ದಾರಿ ,ಈಗಲೇ ಯಾಕೆ ಅಂತ ಇಬ್ಬರು Decide ಮಾಡಿ ಆಯ್ತು ಇನ್ನೊನ್ದು ೨-೩ ವರ್ಷದ ಮೇಲೆ ನೋಡೋನ ಅದಕ್ಕೆನು ಅರ್ಜೆಂಟ್.!!.ಅಪ್ಪ ಅಮ್ಮನು “ಮಕ್ಕಳು ಒದಿದದವರು..ಅದಕ್ಕು ಹೆಚ್ಚಾಗಿ ಚೆನ್ನಾಗಿ ದುಡಿತ ಇರೋರು, ಅವರ ಜೀವನ ಅವರಿಗೆ ಚೆನ್ನಾಗಿ ಗೊತ್ತು” ಅಂತ ತಮ್ಮ ಮೊಮ್ಮಕ್ಕಳ ಕಾಣುವ ಆಸೆಗೆ ಕಡಿವಾಣ ಹಾಕ್ತ ಇದ್ದರು.ಈ ಮಧ್ಯೆ ಸಮೀರನಿಗು ಶಾರ್ಟ್ ಟರ್ಮ್ ಆನ್ಸೈಟ್ assignment ಅಂತ US,UK ಹೀಗೆ ಎರಡೆರಡು, ಮೂರು ಮೂರು ತಿಂಗಳು ಓಡಾಟ ನಡೆದೆ ಇತ್ತು.ಎರಡು ದಿನಕ್ಕೊಮ್ಮೆ ಪದ್ಮಳಿಗೆ ಫೋನ್ ಮಾಡಿ “ಹೇಗಿದಿಯ..?ಕೆಲಸ ಹೇಗೆ ನಡಿತ ಇದೆ..?credit card ಬಿಲ್ಲ್ ಕಟ್ಟಿದ..?” ಹೀಗೆ ಒಂದಷ್ಟು ಸವಿ ಸವಿ ನುಡಿ ನುಡಿದು,ತನ್ನ ಕೆಲಸವಾದಂತೆ ಕುಶಿಯಾಗುತ್ತಿದ್ದ.”ಬರುತ್ತ ಅಪ್ಪನಿಗೊಂನ್ದು ಒಳ್ಳೆಯ Mobile,ತಮ್ಮನಿಗೆ ಒಂದು ipod” ಹೀಗೆ ಒಂದು ಪಟ್ಟಿ ಕೊಟ್ಟು ಪದಮಳು ನಲಿಯುತಿದ್ದಳು.
ಅಗಾಗ ಏನೋ ಒಂದು ರೀತಿಯ ಒಂಟಿತನ,ಎಲ್ಲಾ ಇದ್ದು ಏನೂ ಇರದ ಶೂನ್ಯತೆ ಇಬ್ಬರನ್ನು ಕಾಡ್ತಾ ಇತ್ತು..ಅದಕ್ಕೆ ಹೆಸರಿಡಲಾಗದೆ ಅದನ್ನು ಗುರುತಿಸಿಕೊಳ್ಳಲಾಗದೆ..ಏನೆನೊ ಇವೆಲ್ಲ ಹುಚ್ಚು ಯೋಚನೆಗಳು ಎಲ್ಲ ಸರಿಯಾಗೆ ಇದೆ ಅಲ್ಲ ಅಂತ ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾಗಿ ಮನದ ತುಮುಲವನ್ನು ಅದುಮಿಡುತಿದ್ದರು.
ಹೀಗೆ ಆಗುತ್ತೆ ಅಂತ ಸಮೀರ ಕನಸಿನಲ್ಲೂ ಎಣಿಸಿರಲಿಲ್ಲ.US onsite assignment ಇನ್ದ ಬಂದ ಎರಡು ತಿಂಗಳಿಗೆ ಪದ್ಮಳ onsite assignment ತಯರಿ ನಡೆದಿತ್ತು..ಅವಳ ಮೊದಲ onsite ಸಾಕಷ್ಟು ಎಕ್ಸೈಟ್ ಆಗಿದ್ದಳು..ಸಮೀರನಿಗೆ ಯಾವುದೆ ಅಭ್ಯಂತರ ಇಲ್ಲ ಅನಿಸಿದ್ರು,ಅದೆನೊ ಇತ್ತೀಚೆಗೆ ತನ್ನ ಮನಸ್ಸೆಕೊ ಸರಿ ಇಲ್ಲ, ಇವಳು ಇದ್ರೆ ಚೆನ್ನಾಗಿರುತ್ತೆನೊ ಅನಿಸ್ತ ಇದ್ರು ಹೇಳಿಕೊಳ್ಳಲಿಲ್ಲ.ಪದ್ಮ ಹೊರಡುವಾಗ “Take Care” ಎನ್ನಲು ಮರೆಯಲಿಲ್ಲ.6 ತಿನ್ಗಳ assignment,ಒಂಟಿಯಾಗಿ ಬದೊಕೊದು ಅಭ್ಯಾಸವೆನೋ ಇತ್ತು ,ಈಗ ಇವಳಿಗೆ ಹೊಂದುಕೊಂಡ ಮೇಲೆ ಸ್ವಲ್ಪ ಕಷ್ಟ ಆಗಬಹುದೆನೊ..??
ಒಂದು ನಾಲ್ಕು ದಿನ ಪದ್ಮ ಇಲ್ಲದ ದಿನಗಳು ಸ್ವಲ್ಪ ಏನು ..ತುಂಬಾನೇ ಕಷ್ಟ ಅನಿಸ್ತಾ ಇತ್ತು..ದಿನಗಳು ಹೇಗೊ ಕಳೆದರೂ,ರಾತ್ರಿಗಳು..,ಇವನ ಒಂಟಿತನ,ತಬ್ಬಲಿ ಭಾವನೆಗಳನ್ನ ಕೆದಕಿ ಕೆದಕಿ ತಾಳಲಾರದ ನೋವನ್ನುಂಟಮಾಡ ಹತ್ತಿದವು.ರಾತ್ರಿಗಳ ನೋವು,ನಿದ್ದೆ ಇರದ ಕಣ್ಣು,ಸೋತ ದೇಹ,ನಿತ್ರಾಣವಾದ ಚೇತನವಾಗಿ ಹಗಲುಗಳು ಭೀಕರವಾದಂತೆ ಭಾಸ.ಸಮೀರನಿಗು ನಂಬುವುದು ಸ್ವಲ್ಪ ಕಷ್ಟ ಅನಿಸ್ತ ಇತ್ತು,”ಪದ್ಮಳ ಜೊತೆ ನನಗೆ ನಿಜವಾಗ್ಲು ಅಷ್ಟೊಂದು attachment ಇದಿಯ ಅಥವ ಇಷ್ಟು ದಿನ ಅವಳ ಜೊತೆ ಇದ್ದು ಈಗ ಇರದಕ್ಕೆ ಈ ಸಂಕಟನಾನ ?” ಅರಿಯಲು ಯತ್ನಿಸಿದಷ್ಟು ನಿಗೂಢವಾಗ್ತ ಇತ್ತು.
ಇಷ್ಟು ದಿನ ಕಾಡುತ್ತಿದ್ದ ಹೆಸರಿಡಲಾಗದ….ಬೆಚ್ಚನೆ Bedsheetನಲ್ಲಿ ಇಲಿಯೊ ಹೆಗ್ಗಣನೊ ನುಸುಳಿ ಕಂಗೆಡಿಸುವಂಥ ಕಳವಳಗಳ ಜೊತೆ ಈಗ ಇದೊಂದು ಬೇರೆ tension.”ಯಾಕೊ ಯಾವ ಕೆಲ್ಸಾನು ಸರಿ ಹೋಗ್ತಾ ಇಲ್ಲ..ಎಲ್ಲರಿಂದ,ಎಲ್ಲದರಿಂದ ಒಂದಷ್ಟು ದಿನ ದೂರ ಎಲ್ಲಾದರು ಓಡಿ ಹೊಗಬೇಕು” ಅಂತ ಮನಸ್ಸು ಸಾರಿ ಸಾರಿ ತಿವಿದು ತಿವಿದು ಚುಚ್ಚಿದರೂ,ಸಮೀರನ ವಿವೇಕ,ಸ್ಥಿತಪ್ರಜ್ನೆ ಅವನನ್ನ ಮತ್ತೆ ಎಂದಿನ ಯಾಂತ್ರಿಕ ಜೀವನಕ್ಕೆ ಆಣಿಗೊಳಿಸುತ್ತ ಇದ್ದವು.ಎಷ್ಟು ದಿನ ನಡೆದಿತು ಹೋರಾಟ..?ಹೋರಾಟ ಹೊರಗಿನಾದರೆ..-ಗೆಲುವಿನಲ್ಲೆ ನಲಿವು.ಮನದೊಳಗಿನ ಹೋರಾಟದಲ್ಲಿ ಗೆಲುವಿನಲ್ಲು-ನಲಿವು,ನೋವು, ಸೋಲಿನಲ್ಲು – ನಲಿವು,ನೋವು..
ಉದುರಿ ಉದುರಿ ಬೀಳುತಿದ್ದ ಅವನ ಸಂಯಮ,ತಾಳ್ಮೆ..ಎಲ್ಲವನ್ನು ಕಷ್ಟಪಟ್ಟು ಒಗ್ಗೂಡಿಸಿ..ಬಲವಂತದ ನಗೆಯ ಮುಖವಾಡವೊಂದ ಧರಿಸಿ, ದಿನವು officegeಗೆ ಬಂದು ಹೋಗ್ತಾ ಇದ್ದ..ಬಂದು ಹೋಗುತ್ತಾ ಇದ್ದನೊ ಹೊರತು,ಅವನ ಕಂಡು ಅವನಿಗೆ ಅಸಹ್ಯವಾಗುವಷ್ಟು ಬೇಜವ್ಬದಾರಿ ಇಂದ ವರ್ತಿಸಿತೊಡಗಿದ.ಯಾವ ಕೆಲಸವು ಇಂದು ಮಾಡುವಂತದಲ್ಲ ಎಂಬ ವಿಳಂಬ ಪ್ರವೃತ್ತಿ ಬೆನ್ನು ಹತ್ತಿತು.ಇವತ್ತು mood ಇಲ್ಲ,’ಅದು ಸರಿ ಇಲ್ಲ,ಇದು ಸರಿ ಇಲ್ಲ’,ನಾಳೆ ನೋಡಿದರಾಯ್ತು ಎಂದು ಇಂದುಗಳನೆಲ್ಲ ನಾಳೆಗೆ ನೂಕತೊಡಗಿದ.ನಾಳೆ, ನಾಳೆ ಆದಾಗ ಇಂದೇ ಅಲ್ವೆ..? ಅವುಗಳ ಹಣೆಬರಹವು ಅದೇ ಆಗತೊಡಗಿತು.ಲೇಟ್ ಆಗಿ ಬರುವುದು ,ಬೇಗ ಹೊರಡುವುದು.ಬರುವಾಗ,ಹೊರಡುವಾಗ ಎದುರು ಯಾರಾದರು ಸಿಕ್ಕರೆ ಅದೇನೊ ಪಾಪ ಪ್ರಜ್ನೆ ಕಾಡಿ..,ಒಂದು ಬಲವಂತದ ನಗೆ ನಕ್ಕು….”I wonder when is government going to look into these traffic chaos” ಅಂತ ಒಂದು ಗೂಬೆ ಕೂರಿಸಿ ಹೊರಡುತಿದ್ದ.ಒಬ್ಬರ ಬಳಿಯು ಎರಡು ನಿಮಿಷ ನಿಂತು ಮಾತದಲು ಆಗದಂತ ಅಂಜಿಕೆ,flat ಬಿಟ್ಟು ಹೋದರೆ ಮತ್ತೆ ಯಾವಾಗ ಬಂದು ಗೂಡು ಸೇರುವೆನೆಂಬ ತವಕ.ಕಿಟಕಿ,ಬಾಗಿಲು ತೆರೆದರೆ ಯಾರು ಬಂದು ಎಲ್ಲಿ ಮಾತನಾಡಿಸುವರೋ ಎಂದು ಅಳುಕು.ಕ್ಲೈಂಟ್ ಮೀಟಿಂಗ್ ಗಳನೆಲ್ಲ ಯಾರದ್ರು ಟೀಮ್ ಲೀಡರ್ ಗೆ ಅಸ್ಸೈನ್ ಮಾಡ್ತ ಇದ್ದ,ಇಂಟೆರ್ನಲ್ meetinggaಳಿಗು ಯಾವುದಾದರು ನೆವ ಒಂದನಿತ್ತು,ದೂರ ಉಳಿಯಹತ್ತಿದ.
ಪ್ರಾಜೆಕ್ಟ್ ಮ್ಯಾನೇಜೆರ್ ಅಲ್ಲವೆ ಅವರದೇ ಒಂದು ಗಾಂಭೀರ್ಯ,ಯಾರು…”ಏನಾಯ್ತು..?ನೀನೇಕೆ ಹೀಗಾದೆ..?”ಎಂದು ಕೇಳುವ ಧೈರ್ಯ ಮಾಡಲಿಲ್ಲ.ಹೇಳಿಕೊಳ್ಳೋದಿಕ್ಕೆ ಗೆಳೆಯರು ಅಂತ ಇದ್ದವರೆ ಬೆರಳೆನಿಕೆ ಅವರಲ್ಲೂ ಮನಸ್ಸಿನ ವಿಷ್ಯದ ಮಾತಾಡೊ ಅಷ್ಟು ಸಾಮೀಪ್ಯ ಇರಲಿಲ್ಲ..ಮನೆಯಲ್ಲಿ ಕೂತು ಯಾವುದೊ ಒಂದು ಚಾನ್ನೆಲ್ ನೋಡ್ತಾ ಕೂರೊದು..ಅಪ್ಪ,ಅಮ್ಮ,ಪದ್ಮಳ ಫೋನ್ ಬಂದರೆ “ಬಿಜಿ ಇದ್ದೇನೆ,ಆಮೇಲೆ ಮಾಡುತ್ತೇನೆ” ಅನ್ತಾನೊ,ಏನಾದ್ರು ಸಬೂಬು ನೀಡಿ ಜಾರಿಕೊಳ್ತ ಇದ್ದ.
ತನಗೆ ತಾನು ಅಪರಿಚಿತನಂತೆ ದಿನಗಳ ದೂಡುವಾಗ ಒಂದು ದಿನ ಅವಳು ಸಿಕ್ಕಿದಳು.ಹೆಸರು ಪ್ರಿಯಂವದ..ಅವಳು ಹೇಳುವುದೆಲ್ಲ ಪ್ರಿಯವಾಗದೆ ಇದ್ದರು..,ಹೇಳುವ ರೀತಿ ಪ್ರಿಯವಾಗಿರುತಿತ್ತು.ಅರಳು ಹುರಿದಂತೆ ಮಾತು,ಪಾದರಸದಷ್ಟು ಚುರುಕು..ಎಂತ ಬೇಸತ್ತ ಜೀವಕ್ಕು ಹುರುಪು ನೀಡುವಷ್ಟು ಚೈತನ್ಯ.senior software engineer ಆಗಿ ಇತ್ತಿಚೆಗೆ ಅಷ್ಟೆ ಬೆರೋಂದು compnay ಇಂದ ಬಂದು ಸೇರಿದ್ದಳು.ಬಂದ ನಾಲ್ಕು ದಿನಕ್ಕೆ ಎಲ್ಲರ ಪರಿಚಯ ಮಾಡಿಕೊಂಡು ತಾನೆ ಈ offshore development center ನ ಮಾಲಿಕಳಂತೆ ಓಡಾಡುತಿದ್ದಳು.ಇವಳ ಬಳಿ ಮಾತನಾಡುವಾಗ ಯಾರು ಏಷ್ಟೆ ಜಾಣ್ಮೆ ತೋರಿ flirt ಮಾಡುವ ಆಶಯ ವ್ಯಕ್ತಪಡಿಸಿದರು,ಇವನ್ನೆಲ್ಲ ತನ್ನ ಚೂಪು ಚಾಕುವಿನಂತ ಮಾತಿಗೆ ಮುಗುಳ್ನಗೆಯ ಲೇಪವಿತ್ತು ಹಾಗೆ ಮೊಟುಕಿ ಹಾಕುತಿದ್ದಳು.ತನ್ನೊಡನೆ ಇರುವರೆಲ್ಲ ನಗು ನಗುತ ಹಾಯಾಗಿ ಇರಬೇಕೆಂಬ ಉದಾತ್ತ ಮನೋಭಾವ,ಭಾವಕ್ಕೆ ತಕ್ಕಂತೆ ನಡೆತ.Tea break,lunchge ಎಲ್ಲರನ್ನು ಕರೆಯುವುದು..ಬರದವರನ್ನ ನಗೆ ಮಾತಿನ್ದ ಚೇಡಿಸ್ಸಿ ಒತ್ತಾಯಿಸಿ ಕರೆದೊಯ್ಯುವುದು.officeನ ಹರುಷದ ಮುಖದಂತಿದ್ದಳು.”ಅಯ್ಯೊ ಈ ಜೀವನದಲ್ಲಿ ಇನ್ನೆನು ಹೊಸದಿಲ್ಲ,ಅದೆ routine ಜೀವನ..!!” ಅಂತ ಕೊರಗೊ ಒಂದಷ್ಟು ನಿರಾಶವಾದಿಗಳು ಕೂಡ ಇವಳ ಕಂಡು “ಹೀಗು ಬದುಕಬಹುದೇ..??” ಎಂದು ಅಚ್ಚರಿ ಪಡದೇ ಇಲ್ಲ.
ತನ್ನಲ್ಲೆ ತನ್ನ ಹುಡೂಕುತ,ಎಲ್ಲೆಡೆ ಪರಕೀಯನಿಯಂತೆ feel ಮಾಡುತ್ತಿದ್ದ ಸಮೀರನು officena ಈ ಬದಲಾವಣೆಯನ್ನು ಗಮನಿಸದೇ ಇರಲಿಲ್ಲ.ಒಂದೆದೆ “ಎಲ್ಲರು ಕುಷಿಯಾಗಿದ್ದರೆ, ನನ್ನ ಹೊರತು ಪಡಿಸಿ” ಎಂತದಾದರೆ,ಇನ್ನೊಂದೆಡೆ “ಏನೊ ಎಲ್ಲ ಕುಷಿಯಾಗಿದ್ದು,ನನ್ನ ಬಳಿಗೆ ಯಾವ ಸಮಸ್ಯೆ ತರದೇ ಇದ್ದರೆ ಸಾಕು” ಎಂದು ನಿಟ್ಟುಸಿರುಡಿತ್ತಿದ್ದ.ಕಾಲನ ಕಣ್ಣಾಮುಚ್ಚಲೆ ಆಟವೇ ಹೀಗೆ..ಕೊಟ್ಟವರ ಬಳಿ ಕೊಡಲಾಗದಂತದ್ದ ಕಿತ್ತು ನೋಡಿ ಮಜ ನೋಡುತ್ತಾನೆ,ಕಿತ್ತವರ ಬಳಿ ಹೆಚ್ಚು ಕೊಟ್ಟು.., ಮೈ ಮರೆವುದ ನೋಡಿ ನಗುತ್ತನೆ.
ಪದ್ಮಳಿಗು ಹೋದ ನಾಲ್ಕು ದಿನ ಹೊಸ ಪರಿಸರ,ಹೊಸ ಬಗೆಯ ಕಲ್ಚರ್,ಕಲರ್ ಸ್ವಲ್ಪ ದಿಗಿಲು,ಸ್ವಲ್ಪ ಕುತೂಹಲವನಿಟ್ಟು ದಿನಗಳು ಬೇಗ ಕಳೆದರೂ,ಮತ್ತದೇ ರುಟೀನ್ ಆಗತೊಡಗಿತು. ಅತ್ತ ಪದ್ಮ,ಇತ್ತ ಸಮೀರ ಗಾಣದೆತ್ತಿನಂತೆ ದಿನಗಳ ತಳ್ಳುತ್ತಿದ್ದರು.ಸಮೀರನಿಗೆ ಇದೆಲ್ಲ ಹೊಸದಾಗಿ ತೋರುತ್ತಿತ್ತು,ತಾನೆಂದು ಯಾವ ಪರಿಸ್ಥಿತಿಯಲ್ಲೂ ಯಾರ ಎದುರು ತಲೆ ಬಾಗದವನು ಇದೇನು?ಹೀಗೇಕೆ? ಕತ್ತಲಲ್ಲಿ ಮಿಂಚುಹುಳುದಂತೆ ಮಿಂಚಿ ಮರೆಯಾಗುತಿತ್ತು.ಇಷ್ಟೆಲ್ಲಾ ತಲೆನೋವುಗಳ ಮಧ್ಯೆ ಈಗ ಅವನ ಕಾಡಹತ್ತಿದ್ದು ಪ್ರಿಯಂವದ..!!.ಅವಳ ಮೇಲೆ ಮನಸಾದದ್ದಲ್ಲ,ಏನೋ ಸೆಳೆತ..!!.ಅವಳ ನಗುಮುಖ ಇವನ ಚೈತನ್ಯಕ್ಕೆ ಸವಾಲು ಹಾಕತೊಡಗಿತ್ತು.ಉಡುಗಿಹೋದ ಅವನ ಜೀವಕ್ಕೆ ಅವಳ ಲವಲವಿಕೆ ಜೀವಸೆಲೆಯಂತೆ ತೋರತೊಡಗಿತು.ಪ್ರಿಯಂವದಳೊಡನೆ ಮಾತನಾಡುವ ಅವಕಾಶವಷ್ಟು ದೊರೆಯದಿದ್ದರು ತನ್ನ ಗ್ಲಾಸ್ ಚೇಂಬರ್ ನಿಂದ ಅವಳ ಚಟುವಟಿಕೆಗಳ ಬಗ್ಗೆ ಗಮನವಿಡುವುದು ಅವನ ದಿನಚರಿಯ ಅವಿಭಾಜ್ಯ ಅಂಗವಾದಂತಿತ್ತು.ಮುಖಾ-ಮುಖಿ ಭೇಟಿ ಆದದ್ದು ಅವಳ ಇಂಡಕ್ಶನ್ ಟ್ರೇನಿಂಗ್ ನಲ್ಲಿ ಅವಳ ಟೀಮ್ ಲೀಡರ್ ಮುಖಾಂತರ. ಇದೇನು ಹುಚ್ಚಾಟ?ತನಗಿದು ಶೋಭೆಯೆ? ಸವಾಲುಗಳಿಗೆ ಉತ್ತರವಿಲ್ಲದೇ ತನ್ನ ಹೊಸ ಮನೋವಿರೂಪವ ಅದುಮಿಡಲಾಗದೆ ಒಪ್ಪಿಕೊಳ್ಳತೊಡಗಿದನು.ತಾನು ಅಟೆಂಡ್ ಮಾಡಲೇಬೇಕಾದ ಮೀಟಿಂಗ್ ಒಂದಕ್ಕೆ ಪ್ರಿಯಂವದಳ ಹಾಜರಿ ಇತ್ತು.ನೋಡಿದರು ನೋಡದಂತೆ ತನ್ನ ಪಾಲಿನ ಕೆಲಸದಂತೆ ಒಂದಷ್ಟು ಹುರಿದುಂಬಿಸುವ ಮಾತುಗಳನ್ನು ತನ್ನ ಇತ್ತೀಚಿನ ಹುರುಪಿಲ್ಲದ ಧ್ವನಿಯಿಂದ ಹೊರಡಿಸಿ ತನ್ನ ಚೇಂಬರ್ ಗೆ ಬಂದು ಕೂತಾಗ ಅದೇನೋ ತಳಮಳ.
ಪ್ಯಾಂಟ್ರಿಗೆ ಹೋಗಿ,ಬರುವ ದಾರಿಯಲ್ಲಿ ಎದುರಾದರೆ ಒಂದು ನಗೆ,ಅವಳ ಆ ಆಪ್ತ ನಗೆ ಅವನ ಮನವ ಮತ್ತಷ್ಟು ಕದಡಲು..ನೂರು ಯೋಚನೆಗಳ ಮೀರಿ ಪ್ರಿಯಂವದ ಮೆರೆಯತೊಡಗಿದಳು.ಇತ್ತೀಚೆಗೆ ಬಂದ ಕ್ಲೈಂಟ್ ರಿಪೋರ್ಟ್ ನಲ್ಲಿ,ಸಂಖ್ಯೆಗಳ ಮಾರಾಮಾರಿ ನಡೆದು ಸಮೀರನ ಪ್ರಾಜೆಕ್ಟ್ ನ ಯಶಸ್ಸಿನ ಬಗ್ಗೆ ಅವನ ಸುಪಿರಿಯರ್ ಗಳಿಂದ ಉತ್ತಮ ಪ್ರಶಂಸೆ ಬಂದಿತ್ತು.ಎಂದಿನಂತೆ ಈ ಕಾರಣಕ್ಕಾಗಿ ಟೀಮ್ ಔಟಿಂಗ್ ಮಾಡುವುದೆಂದು ನಿಶ್ಚಯಸಿಲಾಯ್ತು.
ಬರುವ ಶನಿವಾರ ಬೆಳಗ್ಗೆ ೮.೩೦ ರಿಂದ ರಾತ್ರಿ ೯.೦೦ರವರೆಗೆ ರೆಸಾರ್ಟ್ ಒಂದರಲ್ಲಿ ದಿನವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ದಿನಗಳು ದೂಡುತ್ತಿದ್ದ ಸಮೀರನಿಗೆ ಎಲ್ಲ ದಿನಗಳು ಬೇಸರದ ಕುಣಿಕೆಗಳಾಗೆ ತೋರುತ್ತಿದ್ದವು.ಶುಕ್ರವಾರದ್ ಸಂಜೆ ಅವನ ಟೀಮ್ ನವನೊಬ್ಬ “ಸಾರ್ ಯು ಆರ್ ಕಮಿಂಗ್ ರೈಟ್..??” ಅಂದ.ಯಾವುದೋ ಲೋಕದಲ್ಲಿದ್ದಂತ ಸಮೀರ್ ..”ವ್ಹೆರ್..?” ಎಂದುತ್ತರಿಸಿದ. “ಸಾರ್ ಡಿಡ್ ಯು ಫ಼ಾರ್ಗಾಟ್..?ಟೊಮಾರೋ ಇಸ್ ಔರ್ ಟೀಮ್ ಔಟಿಂಗ್” ಅಂದ.ಈಗಾಗಲೇ ಸಹಜವೆನ್ನುವಂತಿದ್ದ ನಿರುತ್ಸಾಹದಿಂದ ಸಮೀರ “ಯಾ..ಯಾ..” ಅಂದ.ಹೋಗುವ ಯಾವುದೇ ಆಸಕ್ತಿ ಇರದಿದ್ದರೂ ಕಾಟಾಚಾರಕ್ಕೆ ಉತ್ತರಿಸಿದ್ದ.ಸಂಜೆ ೫.೩೦ ರ ವೇಳೆಗೆ ಹೊರಟು ನಿಂತಾಗ ಎದುರಾದ ಅವನ ಪ್ರಿಯಂವದಳ ಮುಗುಳ್ನಗೆ ಬೀಳ್ಕೊಟ್ಟಿತ್ತು.
ಮತ್ತದೇ ಏಕಾಂತದಲ್ಲಿ ಹಾಸಿಗೆಯಲ್ಲಿ ಉರುಳುತ್ತ ಇದ್ದವನಿಗೆ ನಿದ್ದೆ ಯಾವಾಗ ಆವರಿಸಿತೋ ತಿಳಿಯಲಿಲ್ಲ.ನೀಲಿಆಗಸದಿ ಕೋಲ್ಮಿಂಚೊಂದು ಬಡಿದಂತೆ ಥಳಥಳಿಸಿದ ಪ್ರಿಯಂವದಳ ಮುಗುಳ್ನಗೆಗೆ ಎಚ್ಚೆತ್ತು ಕುಳಿತ.ಪಕ್ಕದಲ್ಲೇ ಮೋಬೈಲ್ ಸಾಕಷ್ಟು ಮಿಸ್ಸಡ್ ಕಾಲ್ ಇರುವುದು ತಿಳಿಸಿತು.ವಾಸ್ತವಕ್ಕೆ ಬರತೊಡಗಿದಂತೆ ನೆನಪಾದದ್ದು ಟೀಮ್ ಔಟಿಂಗ್ ಅದರೊಂದಿಗೆ ಅವಳ ನಗು.ಹೋಗಬಾರದೆಂಬ ಮನಸು ಈಗ ತಾನು ಹಲವು ನೆವಗಳ ನೀಡಿ,ನೀನು ಪಿ.ಎಂ. ಅಲ್ಲಿ ಇರಬೇಕಾದು ನಿನ್ನ ಕರ್ತವ್ಯ … ಹೀಗೆ ಈ ಸಮಯಕ್ಕೆ ಸಲ್ಲದ ಜವಾಬ್ದಾರಿಯ ನೆನಪಿಸಿ ..ಏಳು ..ಬೇಗ ರೆಡಿಯಾಗು ಎಂದು ನೂಕತೊಡಗಿತು.ಶೇವು,ಸ್ನಾನ,ಮೆಚ್ಚಿನ ಟೀ ಶರ್ಟ್ ತೊಟ್ಟು,ಕಾರು ಹತ್ತಿ ಹೊರಡುವಲ್ಲಿ ಸಮಯ ೧೦. ಮತ್ತೆ ೩೦ ನಿಮಿಷಗಳಲ್ಲಿ ರೆಸಾರ್ಟ್ ತಲುಪಿದ.ಕಂಡವರೊಡನೆ “ಹಾಯ್, ಹೌ ಆರ್ ಯು..?” ಗಳ ವಿನಿಮಯ ಮಾಡಿ ಒಂದೆಡೆ ಕುಳಿತ.ನಿಶ್ಚಯಿಸಿದಂತೆ ಬಗೆ ಬಗೆಯ ಟೀಮ್ ಬಿಲ್ಡಿಂಗ್ , ಗೇಮ್ಸ್ ಹೀಗೆ ಸಾಗಿದ್ದವು.ಸಮೀರನ ಕಣ್ಣು ಒಂದೆಡೆ ನಿಲ್ಲದೆ ಎಲ್ಲೆಡೆ ಹುಡುಕುತಿರಲು, “ಏನು ಸಾರ್ ..ಒಬ್ಬರೇ ಕೂತಿದ್ದಿರಾ..?” ಪ್ರಿಯಂವದ ಅದೇ ಸಾಂಕ್ರಾಮಿಕ ನಗೆಯೊಂದಿಗೆ.ಮೊದಲ ಬಾರಿಗೆ ಕನ್ನಡದಲ್ಲಿ ಮಾತನಡಿಸಿದ್ದು.ಸ್ವಲ್ಪ ತಡವರಿಸಿ,ಚೇತರಿಸಿಕೊಂಡು ..”ಓಹ್ ..ನಿಮಗೆ ಕನ್ನಡ ಬರುತ್ತಾ..? ಗೊತ್ತೇ ಇರಲಿಲ್ಲ. ಏನಿಲ್ಲ ,,ಸುಮ್ಮನೆ ಕೂತು ನೋಡ್ತ ಇದ್ದೆ..” ಅಂದ.”ಅದಲ್ಲ ಸಾರ್ ನಾನು ಕೇಳಿದ್ದು ಒಬ್ಬರೇ ಅಂದ್ರೆ ನಿಮ್ಮ ಮಿಸ್ಸೆಸ್ ಬರಲಿಲ್ಲವ..?”, “ಇಲ್ಲ” ಎಂದಷ್ಟೇ ಚುಟುಕಾಗಿ ಉತ್ತರಿಸಿ ಪರವಾಗಿಲ್ಲ ಹುಡುಗಿ ,ನನ್ನ ಬಗ್ಗೆ ಸಾಕಷ್ಟು ತಿಳಿದೇ ಇದ್ದಾಳೆ ಎಂದು ಮನಸ್ಸಲ್ಲೇ ನಕ್ಕ.
ಒಬ್ಬರ ಮೇಲೆ ಮನಸ್ಸಾದಾಗ ಅವರು ಸಹಜವಾಗಿ ಏನೇ ಮಾಡಿದ್ರೂ ಅದಕ್ಕೇನಾದರೂ ಅರ್ಥ ಹುಡುಕುವುದು ಸಾಮಾನ್ಯ.ತನ್ನಲ್ಲಾಗುತಿರುವ ಬದಲಾವಣೆಗೆ ತಾನೇ ಹೆದರಿದ್ದ,ಕಾರಿನಲ್ಲಿ ಬರುವಾಗ ಮೂಲೆಗೆಸೆದಿದ್ದ ಸಿಡಿ ತೆಗೆದು ಕೇಳೋಕೆ ಶುರು ಮಾಡಿದ್ದ,ಅದ್ರಲ್ಲೂ ಅವನ ಮೆಚ್ಚಿನ ಗೀತೆ, ” ತಮ್ ನಮ್ ತಮ್ ನಮ್..ನನ್ನೀ ಮನವು ಮಿಡಿಯುತಿದೆ…ಓಹ್ ಸೋತಿದೆ…” ಮತ್ತೆ ಮತ್ತೆ ಪ್ಲೇ ಮಾಡಿದ್ದ.ಇವಳ ಜೊತೆ ಮಾತನಾಡಬೇಕು,ಹೆಚ್ಚು ಸಮಯ ಕಳೆಯಬೇಕು …ಮನಸ್ಸು ಹುಚ್ಚೆದ್ದು ಕುಣಿಯಹತ್ತಿತು.
ವಿವೇಕ ಅನ್ನೋದು ಕೆಲ್ಸಕ್ಕೆ ಬಾರದ ಸಮಯದಲ್ಲಿ ಕೆಲಸ ಮಾಡುವ ಸ್ಥಿತಪ್ರಜ್ನೆ.
ತನ್ನ ಸಹೊದ್ಯೋಗಿಗಳ ಜೊತೆ ಆಡದೇ ತನ್ನೊಂದಿಗೆ ಮಾತನಾಡುತ ಪಕ್ಕದಲ್ಲಿ ಕುಳಿತ ಪ್ರಿಯಂವದ ಅಚ್ಚರಿ,ಬೆರಗು,ಸಂದೇಹ,ಸಂತೋಷದ ಮಿಶ್ರ ಭಾವಗಳಿಗೆ ಎಡೆ ಮಾಡಿದ್ದಳು. ಪ್ರಾಜೆಕ್ಟ್,ಪ್ರಪಂಚದ ಆಗುಹೋಗು,ಐ.ಟಿ ಯ ಕಥೆ,ವ್ಯಥೆ..ಹೀಗೆ ಒಂದರಿಂದ ಮತ್ತೊಂದರತ್ತ ವಿಷಯಗಳು ಹೊರಳಿ..ಯಾರೋ ಊಟಕ್ಕೆ ಕೂಗಿದಾಗ ಇಬ್ಬರೂ ಹೊರಟರು.ಏನಿದೆ ಇವಳ ಮನಸ್ಸಲ್ಲಿ ,ನನ್ನೊಂದಿಗೆ ಇಷ್ಟೊಂದು ಸ್ನೇಹಪೂರ್ವಕವಾಗಿ ಯಾಕೆ ಇದ್ದಾಳೆ..ಇವತ್ತು ಮಾತನಾಡಿದಷ್ಟು ..ಕಳೆದ ಮೂರು ತಿಂಗಳು ಸೇರಿದರೂ ಮಾತನಾಡಿರಲಿಲ್ಲ..ಎದೆಯ ಬಾರ ಕಡಿಮೆಯಾದಂತಿತ್ತು.
ಅದೆನೋ “ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ…” ಮನಸ್ಸು ಗುನುಗ್ತಾ ಇತ್ತು.ಅವನು ಹಾಗೇ ಒಳಗೇ ನಕ್ಕ.ಊಟದ ಮಧ್ಯೆಯು ಮಾತು ನಡೆದೇ ಇತ್ತು ..ಕೆಲವರ “ಇಂಟರಪ್ಶನ್”ಗಳ ಜೊತೆಯಲ್ಲಿ..
ಸಮೀರ ಸುಮ್ಮನೆ ಹಾಗೆ ಮುಖ ತೋರಿಸಿ ಹೋಗುವುದೆಂದು ಬಂದವ ಕಾರ್ಯಕ್ರಮ ಮುಗಿಯುವವರೆಗೂ ಉಳಿದ.ಎಲ್ಲರೂ ಹಿಂತಿರುಗಿ ಹೊರಟಾಗ ಒಂದು ಮಾತು ಪ್ರಿಯಂವದಳ ಕೇಳಲೇಬೇಕೆನಿಸಿತು. ” ನಿಮ್ಮ ಮನೆ ಎಲ್ಲಿ..??” ನಿಲ್ಲದ ಯೋಚನೆ ಅವಳು ಯಾವ ಏರಿಯಾ ಹೇಳಿದರೂ ” What a coincidence , ನಾನು ಅದೇ ಕಡೆ ಹೊರಟಿದ್ದೆ ಬನ್ನಿ ಡ್ರಾಪ್ ಮಾಡುತ್ತೇನೆ” ಎಂದು ಹೇಳುವ ಬಯಕೆ.ಆಚಾರ,ವಿಚಾರ,ವೈಯಕ್ತಿಕ ಸಿದ್ದಾಂತಗಳು ,ಮೌಲ್ಯಗಳು ಎಲ್ಲ ಒಮ್ಮೆಲೇ ಕೊಚ್ಚಿಕೊಂಡು ಹೋಗುವುದಿಲ್ಲ,ಬಿರುಗಾಳಿಯಾದರೂ ಗಟ್ಟಿಯಾಗಿ ನಿಲ್ಲುವ ಪ್ರಯತ್ನವಂತೂ ಮಾಡೇ ಮಾಡುತ್ತವೆ.ಎಲ್ಲರಿಗೂ ಶುಭವಿದಾಯ ಹೇಳಿದ.ಕಣ್ಣುಗಳು ಹುಡುಕುತ್ತಿದ್ದ ಪ್ರಿಯಂವದಳಿಗೆ ಮುಗುಳ್ನಗೆಯೊಂದ ಬೀರಿ ಹೊರಟ.ಇತ್ತೀಚಿನ ದಿನಗಳಲ್ಲಿ ಹುಚ್ಚು ಹಿಡಿಸಿದ್ದ ಅವನ ಅವ್ಯಕ್ತ ಭಾವಗಳು,ಹೋರ್ಆಟ,ಎಲ್ಲ ಶಮನಗೊಂಡು ಮನಸ್ಸು ಅದೆಂತೋ ಹಗುರವಾಗಿತ್ತು.ದೊಡ್ಡ ಪ್ರವಾಹವೊಂದು ತೀರಕ್ಕಪ್ಪಳಿಸಿ ಎಲ್ಲವನ್ನೂ ಬಾಚಿಕೊಂಡು ಸತ್ತ ತಿಮಿಂಗಿಲವೊಂದನಪ್ಪಳಿಸಿ ಹೋದಂತೆ.
ಗಂಟೆ ಹನ್ನೊಂದಾದರೂ ಊಟ ಮರೆತ..,ನಾಳೆ ಭಾನುವಾರ, ಅದರ ಅರಿವೂ.. ಅನಗತ್ಯ.ನಿದಿರೆಯೋ,ಮದಿರೆಯೋ..ಏನೋ ಆಹ್ಲಾದವಾದ ತಂಗಾಳಿ ಬೀಸಿದಂತೆ….ಸಮೀರ,ಪ್ರಿಯಂವದಳ ಕೈ ಹಿಡಿದು ಆ ಸುಂದರ ಬನದಲ್ಲಿ ನಡೆಯತೊಡಗಿದ್,ಮುಗಿಲ ಚುಂಬಿಸುವ ಎತ್ತರದ ಮರಗಳು,ಪ್ರಶಾಂತವಾದ ನದೀ ತೀರ,ದೂರದಿ ಒಂದು ನಾವೆ,ಹುಟ್ಟ ಮುಳುಗಿಸಿ ನೂಕಿ ನೂಕಿ ಸಾಗುತ,ಮಧುರ ಗಾನದಿ ಮೈ ಮರೆತಿದ್ದ ಅಂಬಿಗ… ಮೌನವೇ ಮಾತು..!
ಹುಲ್ಲುಹಾಸಿನ ಮೇಲೆ ಕುಳಿತರಿಬ್ಬರು,ಪ್ರಿಯಂವದಳ ಕಣ್ಣಲ್ಲಿ ಕಣ್ಣನಿಟ್ಟು ಹೊಸದು ಲೋಕವೊಂದ ನೋಡುತ್ತಿದ್ದ ಸಮೀರ.ಹೊಳೆವ ಕಣ್ಣು,ನೀಳ ನಾಸಿಕ,ಸಂಜೆಗೆಂಪಿನ ಕೆನ್ನೆ,ಈ ಅಂದಕ್ಕೆಲ್ಲಿಯ ಸಾಟಿ..ಎನೆ ನಾಚಿ ನಲುಗುತ್ತಿದ್ದ ಹರಳಿನ ಓಲೆ,ಕೋಮಲ ತುಟಿಗಳು…..
“ಸಮೀರ್….ಸಮೀರ್….” ಅವಳ ಇಂಪಾದ ಕರೆಗೆ ತುಟಿಯ ಹಿಗ್ಗಿಸುತ,ಆನಂದವ ಸೂಸುತ..ಏನೆಂಬಂತೆ ಸನ್ನೆ ಮಾಡಿದ.
“ಸಮೀರ್…,ಒಂದು ಮಾತು ಕೇಳಲಾ..?? ನನ್ನ ಜೊತೆ ಜೀವನ ಪೂರ್ತಿ ಹೀಗೆ…ಇರ್ತೀರಾ..???”
ಸಣ್ಣನೆ ಬೆವರು,ತಣ್ಣನೆ ನಡುಕ,ಅದುರುತ್ತಿದ್ದ ಗಂಟಲು,ಎದೆಯ ಮೇಲೆ ಅದೆಂತಹದೋ ಭಾರಿ ಭಾರ…ಕಲ್ಲುಗುಂಡಿನಂತದ್ದು.. “ಇಲ್ಲ….!!!!” ಬೆಚ್ಚೆದ್ದು ಕೂತ…. “ಈ ರಾತ್ರಿ ನನ್ನದಲ್ಲ….ಇಲ್ಲ …ಈ ರಾತ್ರಿ ನನ್ನದಲ್ಲ…” !!