” ನಮಸ್ಕಾರ ಸಾರ್ ..ಏನು ಸಾರ್ ಇತ್ತೀಚೆಗೆ ಕಾಣೋದೆ ಇಲ್ಲ…? ಬಟ್ಟೆ ಏನಾದ್ರು ಇತ್ತ..?. ಭಾನುವಾರ ಬೆಳಿಗ್ಗೆನೂ ನೆಮ್ಮದಿಯಾಗಿ ಮಲಗೋಕೆ ಬಿಡೊಲ್ಲವಲ್ಲ ಯಾವ ಕಿರಾತಕ ಅಂತ ಬೈಯುತ್ತ ಬಂದು ಬಾಗಿಲು ತೆಗೆದ್ರೆ, ಇಸ್ತ್ರಿ ಸೀನ. ನಾನು ಈ ಮನೆಗೆ ಬಂದಾಗಿನಿಂದ ಮನೆ ಹತ್ತಿರ ಬಂದು ಬಟ್ಟೆ ತಗೊಂಡು ಹೋಗಿ,ಇಸ್ತ್ರಿ ಮಾಡಿ ತರ್ತಾನೆ.ಇಲ್ಲಿವರೆಗು ಒಂದು ಬಟ್ಟೆ ಸುಡಲಿಲ್ಲ,ಹಾಳು ಮಾಡಿಲ್ಲ,ಇದೂ.. ಒಂದು ಕಾರಣ ಇವನು ನನಗೆ ಇಷ್ಟ ಆಗೋಕೆ.ಮದುವೆಗೆ ಮುಂಚೆ ಇವನ ಜೊತೆ ಹಾಗೆ ಹರಟೆನೂ [...]
Archive for June, 2007
ನಾವೊಬ್ಬರೇ ಅಲ್ಲ..
Posted in ಕಥೆ on June 25, 2007 | 3 Comments »
ನಿಯತ್ತು
Posted in ಕಥೆ on June 18, 2007 | Leave a Comment »
ತನ್ನ ಐದೆಕರೆ ತೋಪಿನಾಗೆ ತುಪಾಕಿ ತಗುಲಿಸಿಕೊಂಡು ತಿರುಗುತ್ತಿದ್ದ ತಿಮ್ಮೇಗೌಡರಿಗೆ ತೋಚಿದ್ದು..ತಾನೊಬ್ಬನೇ ತಿಕಲನಂಗೆ ಸರಿ ಹೊತ್ತಿನಾಗೆ ಇಲ್ಲಿಗಂಟ ಬರಬಾರದಿತ್ತು ಅಂತ.ವಾಪಸ್ ಹೋಗೋದು ಒಳ್ಳೆದು ಅನಿಸ್ತ ಇರೋವಾಗಲೇ “ಜೀವನದಾಗೆ ಯಾವ ನನ್ನ ಮಗಂಗೂ ಹೆದರಲಿಲ್ಲ..ನೋಡೆಬಿಡಾವ ಅದೇನೋ” ಅಂತ ಮತ್ತೆ ಇನ್ನು ಒಳಕ್ಕೆ ನುಗ್ಗಿದರು.ಒಂದು ತಿಂಗಳಿನಾಗೆ ಆಗಲೇ ಮೂರು ಜನ ಕಾವಲಿಗೆ ಅಂತ ಇಟ್ಟೋರು ಅದೇನೋ ದೆಯ್ಯ,ಪಿಸಾಚಿ ಅಂತ ಹೆದರಿ ಓಡಿ ಹೋಗಿದ್ದರು.”ಎಲ್ಲಾ ನರ ಸತ್ತ ನಾಮರ್ದ ಗಳು, ಯಾವೋ ಪೋಲಿ ಹುಡುಗರು ಕಾಯಿ ಕೀಳೋಕೆ ಬಂದು ಇವರನ್ನ ಹೆದರಿಸಿದಂಗೆ ಐತೆ,ಇವು [...]
ನಗು..ಆಯಸ್ಸು ಹೆಚ್ಚಿಸುವುದಂತೆ……?
Posted in ಕಥೆ on June 13, 2007 | 1 Comment »
(ಒಂದು ನೈಜ ಘಟನೆ…ನಾ ಕೇಳಿದಂತೆ..)
ಬರುವಾ ಸುಮೇರ್ ಪುರ್..ಉತ್ತರಪ್ರದೇಶದ ಕಾನ್ ಪುರ್ ನಗರದಿಂದ 80 ಕಿ.ಮೀ ದೂರದಲ್ಲಿರುವ ಒಂದು ಚಿಕ್ಕ ಪಟ್ಟಣ.ಹಳ್ಳಿ ಎನ್ನಲು ಸಾಧ್ಯವಿಲ್ಲ…ಎರಡು ಮೂರು ವೈನ್ ಶಾಪ್ ಗಳು,ಇತ್ತೀಚೆಗೆ ಆರಂಭವಾಗಿದ್ದ ಒಂದು ಒಳ್ಳೆಯ ಹೋಟೆಲ್ಲು,ಎಲ್ಲಾ ನೂತನ ನಕಲಿ ಸಿ.ಡಿ. ಮಾರುವ ಪಿಂಟೊನ ಪಾನ್ ಅಂಗಡಿ,ಅಡಿಗೆಯಿಂದ ಹಿಡಿದು ನಿತ್ಯ ಬಳಕೆಯ ಎಲ್ಲಾ ಸಾಮಗ್ರಿಗಳು ಸಿಗುತ್ತಿದ್ದ ಹಲವಾರು ಲಾಲ ದೂಕಾನುಗಳು,ಅಲ್ಲೇ ಇರುವ ಒಂದು ಸಿಂಗಲ್ ರೋಡ್ ನಲ್ಲೇ ಬಸ್ ಸ್ಟಾಂಡ್,ಪೋಲಿಸ್ ಠಾಣೆಯ ಎದುರು.ಪಕ್ಕದಲ್ಲಿ ಒಂದು ಚಿಕ್ಕ ಗಲ್ಲಿ,ಅದೇ ತರಕಾರಿ ಮಾರುಕಟ್ಟೆ.ವರುಷದ [...]
ಸಿಯರ್’ಸ್ ಟವರ್, ಡೌನ್ ಟೌನ್ ಶಿಕಾಗೊ.
Posted in ಪ್ರವಾಸ on June 4, 2007 | Leave a Comment »
ಸಿಯರ್’ಸ್ ಟವರ್, ೧೯೭೩ ಇಂದ ೧೯೯೮ ರವರೆಗೆ ಜಗತ್ತಿನ ಅತಿ ಎತ್ತರದ ಕಟ್ಟಡವೆಂದು ಖ್ಯಾತಿವೆತ್ತ ೧೧೦ ಮಹಡಿಗಳ ಭವ್ಯ ಕಟ್ಟಡ.
ವಿಕಿಪಿಡಿಯದಲ್ಲಿ ಹೆಚ್ಚಿನ ಮಾಹಿತಿ ಇದೆ:
http://en.wikipedia.org/wiki/Sears_Towers
ಸಿಯರ್’ಸ್ ಟವರ್ ನಿಂದ “ದ ಲೂಪ್” ನ ವಿಹಂಗಮ ನೋಟ
ಆದದ್ದೆಲ್ಲ ಒಳ್ಳೆಯದ್ದಕ್ಕೆ…
Posted in ಕಥೆ on June 4, 2007 | Leave a Comment »
ಹೀಗೆ ಬದುಕಬೇಕು ಅಂತ ಯಾವತ್ತು,ಏನು ಅಂದುಕೊಂಡಿರಲಿಲ್ಲ.ಗಾಳಿ ಬೀಸಿದ ಕಡೆ ತೂರಿಕೊಂಡು ಬಂದದ್ದು ಆಯ್ತು.ಸಮಾಧಾನ ಏನು ಅಂದ್ರೆ.., ಏನಾದ್ರು… ಆಗಿದ್ದೆಲ್ಲ ಒಳ್ಳೆದಕ್ಕೆ ಆಯ್ತು,ಇದು ಆಗಿದ್ದಕ್ಕೆ ನಾನು ಇವತ್ತು ಹೀಗಿರೋದು, ಅದು ಆಗಿದ್ದಕ್ಕೆ ನಾನು ಪಾಠ ಕಲಿತಿದ್ದು ಅಂತ ಜೀವನದುದ್ದಕ್ಕೂ ಸಮಾಧಾನ ಮಾಡ್ಕೊಂದು ಬಂದಿದ್ದು.ಈಗ ತಾನೆ ಕೂತು ತಲೆ ಕೆಡಿಸ್ಕೊಂಡು ಯೋಚನೆ ಮಾಡಿಲ್ಲ ಅಂದ್ರೆ ಈಗಲೂ ಏನು ಆಗಿಲ್ಲ ..ಎಲ್ಲಾ ಸರಿಯಾಗಿದೆ.
ಆದದ್ದೆಲ್ಲ ಒಳ್ಳೆಯದಕ್ಕೆ,ಆಗೋದೆಲ್ಲ ಒಳ್ಳೆಯದಕ್ಕೆ,ಆಗ್ತ ಇರೋದು ಒಳ್ಳೆದಕ್ಕೆ..ಪ್ರಯತ್ನ ಅಷ್ಟೆ ನಮ್ಮದು..ಗೀತಾ ಸಾರ.
ದೊಡ್ಡ ಕಿಟಕಿಗಳಿಗೆ ಮುಚ್ಚಿದ ದಪ್ಪದ ಪರದೆ ಆಗ ಈಗ [...]
ಸುಮ್ಮನೆ ಕೂರೊಕೆ ಆಗದೆ ಗೀಚಿದವು
Posted in ಹರಟೆ on June 4, 2007 | Leave a Comment »
ಬರ್‍ತಾ ಬರ್‍ತಾ “ಮಲ್ಯರ” ಕುದುರೆ “ತೂರಾಡ್ತ” ಇತ್ತಂತೆ.
ಅಜ್ಜಿಗೆ ಅರಿವೆ ಕಾಟ
ಮಗಳಿಗೆ “ಅರಿವಿರದ” ಕಾಟ
ಅಜ್ಜ ಹಾಕಿದ ಆಲದಮರಕ್ಕೆ
ಪಾಶ್ಚಾತ್ಯ ಗೊಬ್ಬರ ಹಾಕಿದರಂತೆ
ಉಂಡೂ ಹೋದ,ಪ್ಲೇಟೂ ತಗೊಂಡು
ಯಾಕೆ ಒಲ್ಲೆ ಮಗಳೆ ಅಂದ್ರೆ
“ಶಟಲ್” ಹೋದ್ರೆ “ಎಕ್ಸ್ಪಪ್ರೆಸ್” ಅಂದಳಂತೆ.
ಹೆಂಡ ಸಾರಾಯಿ ಸಹವಾಸ
ಮತ್ತು ಇಳಿಯೋ ತನಕ ಸ್ವರ್ಗವಾಸ
ಚಿಂತೆ ಇಲ್ಲದವರಿಗೆ ಹೊಸೊರು ರೋಡ್ ನಲ್ಲಿ ನಿದ್ದೆಯಂತೆ
ಉದ್ಯೋಗವಿಲ್ಲದ “ಬಡಗಿ” ಕಂಪ್ಯೂಟರ್ ಕೋರ್ಸ್ ಸೇರಿದನಂತೆ
ಅಲ್ಪನಿಗೆ ಆನ್ ಸೈಟ್ ಅಸ್ಸೈನ್ ಮೆಂಟ್ ಸಿಕ್ಕಿದ್ರೆ, ವೀಸಾ ಗೆ ಫ಼್ರ್‍ಏಮ್ ಹಾಕಿಸಿ ಇಟ್ಟನಂತೆ
ಈ ರಾತ್ರಿ ನನ್ನದಲ್ಲ ..
Posted in ಕಥೆ on June 4, 2007 | Leave a Comment »
ಕಣ್ಣು ಮುಚ್ಚಿದರೆ ತಲೆ ಚಿಟ್ಟೆನಿಸುವ ಯೋಚನೆಗಳು..ಒಂದಾ..,ಎರಡಾ..? ಏನೋ ಒಂದು ಸಮಾಧಾನ ಮಾಡ್ಕೊಂಡು ಬಿಡೋಣ ಅನ್ನೋದಿಕ್ಕೆ. “ಅಲ್ಲ ನನಗೆ ಯಾಕೆ ಬೇಕಿತ್ತು ..? ಏನಿದು ತಿಕಲು..?” ಅಂತ ಸಮೀರ ಒಂದೆರ್‍ಎಡು ತಾಸಿನಿಂದ ತನ್ನ Flatಲ್ಲಿ ದಿಂಬಿಗೆ ತಲೆ ಕೊಟ್ಟು ತಲೆ ಕೆಡಿಸಿಕೊಳ್ತಾನೆ ಇದ್ದ.”ಪದ್ಮನಾದ್ರೂ ಇದ್ದಿದ್ರೆ ಈ ತಲೆನೋವು ಇರ್ತಿರ್ಲಿಲ್ವೇನೊ” ಅಂತ ಹಳಹಳಿಸ್ತಾನೆ ಇದ್ದ.
ಪ್ರಪಂಚದ ಕಣ್ಣಿಗೆ ಸಮೀರ ಮಲ್ಟಿನ್ಯಾಶನಲ್ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್.ಹೆಸರಾಂತ ಬಿಲ್ಡರ್ ನ ಹೆಸರಿಲ್ಲದ Flat…ಈಗ ಇವನ ಹೆಸರು ಮನೆ ಮುಂದೆ.ದೊಡ್ಡ ಕಾರು,ಸಣ್ಣ ಸಂಸಾರ.ಹೆಂಡತಿ ಪದ್ಮಲತ ಮತ್ತೊಂದು [...]